ಉಳಿಯಬೇಕಿದ್ದರೆ
ಮುಖ್ಯಮಂತ್ರಿ ಹುದ್ದೆ
ಬಿಡಬೇಕಾಗುತ್ತದೆ
ಹಲವು ದಿನ ನಿದ್ದೆ
ಉಳಿಸಿಕೊಳಬೇಕಲ್ಲ
ಹಲವು ಜನರ ಒಲವು
ಇಲ್ಲದಿದ್ದರೆ
ಭಿನ್ನಮತೀಯರಿಗೆ ಗೆಲುವು
ಇಂದಿದ್ದವರು ನಾಳೆ
ಇರಲಾರರು ಜೊತೆಗೆ
ಎಲ್ಲರಿಗು ಆಸೆ
ಕುರ್ಚಿಯದ್ದೆ ಕೊನೆಗೆ
ಇಂದು ಈ ಕಡೆ, ನಾಳೆ ಆ ಕಡೆ
ಉಳಿಯಲಿಲ್ಲ ನಿಷ್ಠೆ
ಯಾರಲ್ಲಿದೆಯೋ ಅಧಿಕಾರ
ನಾವವರ ಜೋತೆಗಷ್ಟೇ
ಕೊಡು ಕೊಳ್ಳುವಿಕೆಯಲ್ಲಿ
ಯಾರು ಯಾರಿಗೋ ಪಾಲು
ಚುನಾಯಿಸಿದ ಮತದಾರ
ನೋಡಿಯೇ ಕಂಗಾಲು.