ಇಬ್ಬರಿದ್ದ ನಾವು ಮೂವರಾಗಿ ನೂರು ದಿನ ಕಳೆದಿದೆ. ಮೊದಲಿನ ದಿನಗಳಿಗೂ ಈಗಿನ ದಿನಗಳಿಗೂ ಬಹಳ ವ್ಯತ್ಯಾಸ ಕಾಣುತ್ತಿದೆ!
ಮೊದಲಾದರೆ ನಮ್ಮ ಇಷ್ಟದ ಹಾಗೆ ಊಟ- ತಿಂಡಿ, ಹರಟೆ, ತಿರುಗಾಟ. ಈಗ ಎಲ್ಲವೂ ಬದಲಾಗಿದೆ. ಟಿವಿ,ಇಂಟರ್ನೆಟ್ ನೋಡದ ದಿನಗಳೇ ಹೆಚ್ಚಾಗುತ್ತಿವೆ. ಮೊದಲಾದರೆ ಹೆಂಡತಿ ಹೇಳಿದರೂ ಕೇಳದೆ ಪೇಪರ್ ಓದುತ್ತಿದ್ದೆ. ಈಗ ಮಗರಾಯ ಬಂದ ಮೇಲೆ ಎಲ್ಲಾ ಬಂದ್.
ನಮ್ಮೊಳಗೇ ಜಗಳವಾಡಲು ಬೇಕಾದಷ್ಟು ಸಮಯವಿತ್ತು.ಈಗ ಮಗನ ಜೊತೆ ಕಾಲ ಕಳೆಯುವುದೇ ಕೆಲಸ.
ಯಾವತ್ತೂ ಹಾಡದ ನಾನೂ ಈಗ ಹಾಡಲು ಕಲಿತಿದ್ದೇನೆ! ಕಥೆ ಹೇಳಲು ಬಾರದ ನಾನೂ ಈಗ ಕಥೆ ಹೇಳಲು ಕಲಿಯುತ್ತಿದ್ದೇನೆ. ಮಗ ಮಾತು ಕಲಿತ ಮೇಲೆ ಕೇಳಬಹುದಾದ ಪ್ರಶ್ನೆಗಳಿಗೆ ಉತ್ತರಿಸಲು ಯಾವ ಯಾವ ವೆಬ್ ಸೈಟ್ ನೋಡಬೇಕು ಅಂತ ಯೋಚಿಸುತ್ತಿದ್ದೇನೆ. ಆನ್ ಲೈನ್ ಸಿಗಬಹುದಾದ ಪುಸ್ತಕಗಳನ್ನು ಗಮನಿಸುತ್ತಿದ್ದೇನೆ.
ಒಟ್ಟಾರೆ ಜೀವನ ಶೈಲಿಯೇ ಬದಲಾಗುತ್ತಿದೆ ಅದೇ ಹಳೆಯ ಸ್ಟೈಲ್ ಬೇಜಾರಾಗುತ್ತಿದೆ ಅಂತ ಅನಿಸುವ ಸಮಯದಲ್ಲೇ ಮಗ ಬಂದಿದ್ದಾನೆ. ಹೊಸತನದ ಹುಡುಕಾಟಕ್ಕೆ ನಾಂದಿ ಹಾಡಿಸಿದ 'ಸ್ಕಂದ'ನಿಗೆ ನಾನು ಆಭಾರಿ.
ಈ ಎಲ್ಲದರ ನಡುವೆ ಹೆಂಡತಿಯದ್ದು ಮಾತ್ರ ಕಂಪ್ಲೇಂಟ್: 'ನನಗೆ ಸಮಯ ಕಡಿಮೆ ಕೊಡುತ್ತಿದ್ದಿಯ' ಅಂತ. ಇದಕ್ಕೆ ಉತ್ತರ ಸದ್ಯಕ್ಕಿಲ್ಲ!