ನಿನ್ನೊಲುಮೆ ಪಡೆಯಲಿಕೆ
ನಿನ್ನೆದೆಯ ಗೆಲ್ಲಲಿಕೆ
ನನ್ನೆದೆಗೆ ತವಕವೇಕೆ?
Sunday, May 8, 2011
Saturday, May 7, 2011
ನೋವು
ನೋವಿರುವುದು ತುಂಬಾ
ನಮ್ಮ ಎದೆಯೊಳಗೆ
ಚೀರುತಿಹುದು ನಿತ್ಯ
ಕೇಳುವವರಿಲ್ಲದೆ.
ಜೀವನವು ದಿನನಿತ್ಯ
ಹೋರಾಟದ ಹಾದಿಯು
ನೋವುಗಳು,ಗಾಯಗಳು
ಹೊಸದಲ್ಲ ನಮಗೆ.
ಆಸೆಕಂಗಳ ಕನಸು
ನನಸಾಗದಿರೆ ಬೇಗ
ನೊಂದುಕೊಂಡರು ಹೃದಯ
ಇಲ್ಲ ಉಪಯೋಗ.
ನಾವಂದುಕೊಂಡಂತೆ
ನಡೆವುದಿಲ್ಲ ಇಲ್ಲಿ
ಮುದುರಿಹೋದರೆ ನಾವು
ಜಾಗವಿಲ್ಲ ಜಗದಲ್ಲಿ.
ಹೊಸ ಆಸೆ, ಹೊಸ ಕನಸು
ಇರಲಿ ನಮ್ಮೊಡನೆ
ಮತ್ತೆ ಮುನ್ನಡೆಯುವ
ನನಸಾಗಿಸುವೆಡೆಗೆ.
ನಮ್ಮ ಎದೆಯೊಳಗೆ
ಚೀರುತಿಹುದು ನಿತ್ಯ
ಕೇಳುವವರಿಲ್ಲದೆ.
ಜೀವನವು ದಿನನಿತ್ಯ
ಹೋರಾಟದ ಹಾದಿಯು
ನೋವುಗಳು,ಗಾಯಗಳು
ಹೊಸದಲ್ಲ ನಮಗೆ.
ಆಸೆಕಂಗಳ ಕನಸು
ನನಸಾಗದಿರೆ ಬೇಗ
ನೊಂದುಕೊಂಡರು ಹೃದಯ
ಇಲ್ಲ ಉಪಯೋಗ.
ನಾವಂದುಕೊಂಡಂತೆ
ನಡೆವುದಿಲ್ಲ ಇಲ್ಲಿ
ಮುದುರಿಹೋದರೆ ನಾವು
ಜಾಗವಿಲ್ಲ ಜಗದಲ್ಲಿ.
ಹೊಸ ಆಸೆ, ಹೊಸ ಕನಸು
ಇರಲಿ ನಮ್ಮೊಡನೆ
ಮತ್ತೆ ಮುನ್ನಡೆಯುವ
ನನಸಾಗಿಸುವೆಡೆಗೆ.
Subscribe to:
Posts (Atom)