ಇದು ಅಧುನಿಕ ಯುಗ. ಯಾರಿಗೂ ಸಮಯವಿಲ್ಲ. ದಿನವಿಡೀ ನೋಡಲಾಗುವುದಿಲ್ಲ ಎಂದೆ ಟಿ-೨೦ ಕ್ರಿಕೆಟ್ ಪ್ರಸಿದ್ದವಾಗಿದೆ. ಎಲ್ಲವು ಬೇಗಬೇಗನೆ ಆಗಬೇಕು. ಅಂತಿರುವಾಗ, ಪುಟಗಟ್ಟಲೆ ಬರೆದರೆ ಯಾರು ಓದುತ್ತಾರೆ? ಹಾಗಂತ ಓದುವುದು/ಬರೆಯುವುದು ಬಿಡಲಾಗುವುದಿಲ್ಲ. ಹಾಗಾಗಿಯೇ ಹನಿಗವನಗಳು ಜನಪ್ರಿಯವಾಗಿರುವುದು! ಅಲ್ಲದೆ, ಪತ್ರಿಕೆಗಳಲ್ಲಿ ಪುಟವೊಂದರಲ್ಲಿ ಸ್ವಲ್ಪವೇ ಜಾಗ ಉಳಿದುಕೊಂಡರೆ ಬೇರೇನೂ ಹಾಕಲಾಗದಿದ್ದಾಗ ಸಹಾಯಕ್ಕೆ ಬರುವುದು ಈ 'ಹನಿ ' ಗಳೇ. ಮಳೆಗಾಲ ನಿಧಾನವಾಗಿ ಕಾಲಿಡುತ್ತಿರುವುದರಿಂದ ಹೊರಗೆಲ್ಲ ಹನಿ-ತುಂತುರು ಮಳೆ. ಇಲ್ಲೂ ಕೆಲವೊಂದು ಹನಿಗಳು...
ಬೆಲೆ
'ನಿನ್ನ ಮಾತಿಗೆ
ಬೆಲೆಯೇ
ಇಲ್ಲ'
ಎಂದವರು
ಬೆಚ್ಚಿದ್ದು
ನೋಡಿದ ಮೇಲೆ
ಟೆಲಿಫೋನ್ ಬಿಲ್ಲ!
ಸಲಹೆ
ಗೆಳತಿಯರೆಂದು
ಸುತ್ತುತ್ತಿದ್ದ ನನ್ನ
ಕಂಡು
ಮನೆಯಾಕೆ
ಕೇಳಿದಳು:
ಅವರ ಜೊತೆಗೆ
ಹೋಗಿ ನಿಮಗೆ
ಮನೆಯೇಕೆ?
ಕಾರಣ
ಅವನಿಗೇಕೆ
ಅಷ್ಟು ಬೇಸರ?
ಬೇರೇನಿಲ್ಲ-
ಅವನ ಪ್ರೇಯಸಿಗೆ
ಸಿಕ್ಕಿದ್ದಾನಂತೆ
ಬೇರೆ ನಲ್ಲ.
ನೆಪ
ಒಳ್ಳೆಯದು
ಯಾವ
ಪಕ್ಷ ಅಂತೀರಿ?
ಯಾವುದು ಇಲ್ಲ-
ಅದಕ್ಕೆ ನಾನು
ಪಕ್ಷಾಂತರಿ.
ಸಂದಿಗ್ಧ
ನಿನ್ನೊಡನೆ ಮಾತಾಡದಿದ್ದರೆ
ಮಾತಾಡಿಲ್ಲ ಎಂದು ಕೊರಗುವುದು
ಮಾತಾಡಿದರೆ ನನ್ನ
ಜೇಬು ಕರಗುವುದು!
No comments:
Post a Comment