Monday, December 13, 2010

ಅವಳ ನೆನಪು

ಅವಳು ಜಾಣೆ ತುಂಟಿ ಕೂಡ
ನಕ್ಕುಬಿಟ್ಟು ಕಿಲಕಿಲ
ಮನವ ಕದ್ದು ಎದೆಯ ಸೇರಿ
ಮುದವ ಕೊಟ್ಟು ಪ್ರತಿ ಸಲ.

ಮೊದಲ ಬಾರಿ ಅವಳು ಕಂಡು
ಮೆಲ್ಲನುಲಿದು ಹೋದಳು
ಅಂದು ಬಿಟ್ಟು ಹೋದರೇನು
ಮನದ ಒಳಗೆ ನಿಂದಳು.

ಮತ್ತೆ ಮತ್ತೆ ಸಿಗಲು ದಿನವು
ಪ್ರೀತಿ ಅರಳಿ ಬೆಚ್ಚಗೆ
ಸುತ್ತ ಜನರು ನಕ್ಕರು
ಬೆಳೆದ ನಮ್ಮ ಹುಚ್ಚಿಗೆ.

ಅವಳ ನೆನಪು ನಿತ್ಯ ಬೇಕು
ಮನವು ದೊಡ್ಡ ಮರ್ಕಟ
ದಿನವು ಕಾಣದಿದ್ದರೆ
ಎದೆಯ ಒಳಗೆ ಸಂಕಟ.

2 comments:

teju said...

yara bagge barita iddi ravi???

chembarpu said...

nice 1 shastry... gr8 man.... whn u get tym to write poems lyk ths man....